ಗುರ್ಬಿ ಚಿತ್ರಕ್ಕೆ ಯು ಸರ್ಟಿಫಿಕೆಟ್
Posted date: 03 Thu, Sep 2015 – 08:31:29 AM

ದುರ್ಗಾಂಬ ಫಿಲಂಸ್, ಬ್ರಹ್ಮಾವರ ಲಾಂಛನದಲ್ಲಿ ಶ್ರೀಮತಿ. ಮೀರಾ ಕೆ ಉಪ್ಪುರು ನಿರ್ಮಾಣದ ಗುರ್ಬಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು ಸರ್ಟಿಫಿಕೆಟ್ ನೀಡಿದೆ, ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಕೃಷ್ಣಪ್ಪ ಉಪ್ಪೂರು, ಇವರು ಈ ಹಿಂದೆ ಮಾರಿಬೆಲೆ ಕಂಚಿಲ್ದ ಬಾಲೆ (ತುಳು) ಮಹಾನದಿ, ಈಗ ಗುರ್ಬಿ ಚಿತ್ರ ಮಾಡಿದ್ದಾರೆ. ಚಿತ್ರದ ಛಾಯಾಗ್ರಹಣ - ವೀನಸ್ ಮೂರ್ತಿ, ಸಂಗೀತ - ವಿವೇಕ್ ಚಕ್ರವರ್ತಿ, ಸಂಕಲನ-ಕೆ.ಎಂ.ಪ್ರಕಾಶ್, ನೃತ್ಯ -ಮದನ್ ಹರಿಣಿ, ಕಲೆ-ಮೋಹನ್ ಬಿ ಕೆರೆ, ಸುಳ್ಯ ಜೀವನ್ ರಾಮ್, ಗೀತೆ-ಡಾ||ಕಾತ್ಯಾಯಿನಿ ಕುಂಜಿಬೆಟ್ಟು,  ನಿರ್ದೇಶನ ಸಹಾಯ - ಪ್ರಶಾಂತ್-ರವಿರಾಜ್, ನಿರ್ವಹಣೆ-ನರಸಿಂಹ ಜಾಲಹಳ್ಳಿ, ತಾರಾಗಣದಲ್ಲಿ - ಅಶ್ವಿತಾ, ಸುನಿಲ್, ಮಂಡ್ಯ ರಮೇಶ್, ಕಿರ್ತಿರಾಜ್, ಜೀವನ್ ರಾಂ, ಉದಯ್ ಕುಮಾರ್ ಶೆಟ್ಟಿ, ಸುಧಾ ಬಂಡೂರು, ಚಂದ್ರಶೇಖರ್, ರಂಜಿತಾ ಶೆಟ್ಟಿ, ಡಿಂಗ್ರಿ ನರೇಶ್, ರೇವತಿ ನಾಡಿಗೇರ್, ಸುಜಾತಾ ಶೆಟ್ಟಿ ಮುಂತಾದವರಿದ್ದಾರೆ.  ಇದು ಗುಡ್ಡುಗಾಡು ಜನಾಂಗದ ನೋವು ನಲಿವುಗಳು, ದು:ಖ ದುಮ್ಮಾನದ ಬದುಕನ್ನು ಚಿತ್ರಿಸುವ ಚಿತ್ರವಾಗಿದ್ದು, ಶೋಷಣೆ ವಿರುದ್ಧ ದನಿ ಎತ್ತುವ ಸಮಾಜಕ್ಕೆ ಅರಿವು ಮೂಡಿಸುವ ಉದ್ದೇಶ ಹೊಂದಿರುವ ಚಿತ್ರವಾಗಿರುತ್ತದೆ. ಈ ಚಿತ್ರಕ್ಕೆ ಸಿದ್ಧಾಪುರ ಸಮೀಪ ದೇವರಬಾಳು, ಅಜ್ರಿ, ಕುಂದಾಪುವ ಸುತ್ತಮುತ್ತ ಬಾಳೆಹೊನ್ನುರು ಮುಂತಾದೆಡೆ ನಡೆದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed